ಪ್ರಿಚರ್ಡ್, ಕ್ಯಾತರಿನ್ ಸುಸಾನ್ನಾ
	1884-ಆಸ್ಟ್ರೇಲಿಯದ ಇಂಗ್ಲಿಷ್ ಕಾದಂಬರಿಕಾರ್ತಿ ಪತ್ರಿಕೋದ್ಯಮಿಯ ಮಗಳಾದ ಈಕೆ ಹುಟ್ಟಿದ್ದು ಫೀಜಿಯಲ್ಲಿ, ಮಗುವಾಗಿದ್ದಾಗಲೇ ಆಸ್ಟ್ರೇಲಿಯಕ್ಕೆ ಹೋದ ಈಕೆ ಪಶ್ಚಿಮ ಆಸ್ಟ್ರೇಲಿಯದಲ್ಲಿ ನೆಲಸಿದರೂ ಪ್ರಪಂಚದ ಉದ್ದಗಲಕ್ಕೂ ಸುತ್ತಿದಳು. ಲಂಡನ್ನಿನಲ್ಲಿಯೂ ಕೆಲಕಾಲವಾಸಿಸಿದ್ದಳು. ಆ ಕಾಲದ ಮೂವರು ಪ್ರಮುಖ ಲೇಖಕಿಯರಲ್ಲಿ ಈಕೆಯೂ ಒಬ್ಬಳು. ಅಂತಃಕರಣದ ಉತ್ಸಾಹಿ ಕತೆಗಾರ್ತಿಯಾಗಿ ಈಕೆ ಸಾಹಿತ್ಯ ಜೀವನವನ್ನಾರಂಭಿಸಿದಳು. ಮೊದಮೊದಲು ಅದ್ಬುತರಮ್ಯ ರೋಮಾಂಚಕಾರಿ ಕತೆಗಳನ್ನು ಬರೆದು ಓದುಗರನ್ನು ಆಕರ್ಷಿಸಿದರೂ ಮುಂದೆ 1890ರ ಅನಂತರ ಕಟ್ಟಾವಾಸ್ತವವಾದಿಯಾಗಿ ತಾನು ನೋಡಿದ ಸಾಮಾಜಿಕ ಜೀವನದ ಯಥಾವತ್ತಾದ ಚಿತ್ರಣವನ್ನು ಕಾದಂಬರಿಗಳಲ್ಲಿ ಕೊಟ್ಟಳು. ನಿರ್ದಾಕ್ಷಿಣ್ಯವಾಗಿ ಘಟನೆಗಳನ್ನು ಸನ್ನಿವೇಶಗಳನ್ನು ತೂಗಿ ಬೆಲೆಕಟ್ಟಿದಳು. ಆಸ್ಟ್ರೇಲಿಯದ ಮೂಲ ಬುಡಕಟ್ಟಿನವರ (ಬುಷ್) ಜೀವನದ ಬಗ್ಗೆ ತೀವ್ರವಾದ ಅಭಿಮಾನವಿದ್ದುದರಿಂದ ಅವರ ಬದುಕಿನ ಚಿತ್ರಗಳನ್ನು ಕೊಡುವಾಗ ಈಕೆ ಭಾವನಾಪರವಶಳಾಗುತ್ತಾಳೆ. ಆ ಕಾಲದ ಕಾದಂಬರಿಕಾರರಲ್ಲಿ ಕೌಟುಂಬಿಕ ಜೀವನವನ್ನು ಚಿತ್ರಿಸುವುದರಲ್ಲಿ ಅಗ್ರಗಣ್ಯಳೆನಿಸಿದಳು. ಈಕೆಯ ಕಾದಂಬರಿ ಸರಣಿಯಲ್ಲಿ ದಿ ಪಯೋನೀರ್ಸ್ (1915) ವಿಂಡ್ಲ್ ಸ್ಟ್ರಾಸ್ (1915);. ವರ್ಡಂಗ್ ಬುಲಕ್ಸ್ (1926); ಕೊನಾರ್ಡೂ(1929); ಹ್ಯಾಕ್ಸ್‍ಬೀಸ್ ಸರ್ಕಸ್ (1930): ಇಂಟಿಮೇಟ್ ಸ್ಟ್ರೇಂಜರ್ಸ್ (1937); ದಿ ರೋರಿಂಗ್ ನೈನ್ ಟೀಸ್ (1946), ಗೋಲ್ಡನ್ ಮೈಲ್ಸ್ (1948); ದಿ ವಿಂಗ್ಡ್ ಸೀಡ್ಸ್(1950)-ಇವು ಹೆಸರಿಸಬಹುದಾದವು. ಇವುಗಳಲ್ಲಿ ವರ್ಕಿಂಗ್ ಬುಲಕ್ಸ್ ಮತ್ತು ಕೊನಾರ್ಡೊ ಎಂಬ ಕಾದಂಬರಿಗಳು ಈಕೆಯ ಪರಮೋತ್ಕøಷ್ಟ ಕೃತಿಗಳು.
	ದಿ ಪಯೋನೀರ್ಸ್ ಎಂಬ ಕಾದಂಬರಿಗೆ ಒಂದು ಸಾವಿರ ಪೌಂಡುಗಳ ಹಾಡರ್ ಆ್ಯಂಡ್ ಸ್ಟೌಟನ್ ಎಂಪೈರ್ ಬಹುಮಾನ ಬಂದಿತು. ಈ ಕೃತಿ ಇನ್ನೂ ಅಪಕ್ವಾದುದು ಎನ್ನುವಂತಹುದು. ಎರಡನೆಯ ಪುಸ್ತಕ ಬ್ಸ್ಯಾಕ್ ಓಪಲ್‍ನಲ್ಲಿ ಕಾದಂಬರಿಕಾರ್ತಿಯ ಪ್ರತಿಭೆ ವಿಕಾಸಗೊಳ್ಳುತ್ತಿರುವುದನ್ನು ಗುರುತಿಸಬಹುದು. ಓಪಲ್ ಫೀಲ್ಡಿನಲ್ಲಿ ಮನೆಮಾಡಿ ನಾಟಾ ಕಡಿಯುವ ಕೂಲಿಗಳ ಮಧ್ಯೆ ವಾಸಿಸಿಬಂದ ಅನುಭವದಿಂದ ರಚಿತವಾದುದು ಈ ಕಾದಂಬರಿ ದಿ ರೋರಿಂಗ್ ನೈನ್‍ಟೀಸ್‍ನಲ್ಲಿ ಕಾದಂಬರಿಗಾರ್ತಿಯ ಸಾಮಥ್ರ್ಯ ಎದ್ದು ಕಾಣುತ್ತದೆ.
	 ಈಕೆ ಕಾದಂಬರಿಗಳನ್ನಷ್ಟೇ ಅಲ್ಲ ಕವನಗಳನ್ನೂ ಸಣ್ಣ ಕತೆಗಳನ್ನೂ ಹಾಗೂ ನಾಟಕಗಳನ್ನೂ ಬರೆದಿದ್ದಾಳೆ. ವಾಮರಂಗದ ಪ್ರಸಾರ ಸಾಹಿತ್ಯಕ್ಕೂ ಕೊಡುಗೆಯನ್ನಿತ್ತಿದ್ದಾಳೆ. ಕಿಸ್‍ಅನ್‍ದಿಲಿಪ್ಸ್ (1932), ಎಂಬ ಈಕೆಯ ಕಥಾಸಂಕಲನ ಗಮನಾರ್ಹವಾದುದು. ದಿ ಆರ್ತ್ ಲವರ್ ಕವನ ಸಂಕಲನ; ಬ್ರೂಮ್ಲಿ ಇನ್ಸ್ ನಾಟಕ. ಇಂಟಿಮೇಟ್ ಸ್ಟ್ರೇಜರ್ಸ್, ದಿ ರೋರಿಂಗ್ ನೈನ್‍ಟೀಸ್, ಗೋಲ್ಡನ್ ಮೈಲ್ಸ್, ದಿ ವಿಂಗ್ಡ್‍ಸೀಡ್ಸ್ ಈಕೆಯ ಮರಣೋತ್ತರ ಪ್ರಕಟಗೊಂಡ ಕೃತಿಗಳು.
(ಕೆ.ಬಿ.ಪಿ.)